Diet to Aid Recovery from Covid 19
Covid19 is intricately linked to modern food, modern lifestyle, and the related metabolic derangements – these derangements worsen covid and covid in turn worsens these derangements. We can defeat covid by improving the metabolic profile, by changing our food habits and lifestyle.
Eat Healthy – Exercise Regularly – Sleep Adequately!
Preferred food for faster recovery from covid: Consume 2 to 3 eggs per day (scrambled / boiled / omelette), hot chicken soups or dhal soups with mild spices, more of nuts like cashews and walnuts, and also fish and meat and plenty of vegetables. In fact, only these foods may be enough to help full recovery, without getting complications!
Strictly avoid fruits (fresh or dry), sugars, all sweets, honey and jaggery. Restrict dairy products. Avoid ready-made, bakery products and packaged foods totally.
Best way to regulate the cytokine storm is to avoid high glycemic and refined foods. Fructose sugar in fruits creates oxidative stress, adding to inflammation and counters the benefits, if any!
Sample Menu:
Breakfast – 8 am: 2-3 boiled eggs / 2-3 steamed idlis or 1-2 Ragi dosa, with coconut chutney or Dhal, plus tea or coffee with minimum or no milk and no sugar or jaggery
11am: Warm lemon water with salt, and nuts like cashews, almonds, walnuts or pista (no peanuts)
Lunch – 2 pm: Boiled rice (one cup), plenty of vegetables, dhal or coconut veg curry / chicken curry / fish curry; one steamed or sauted vegetable side dish; avoid potatoes, beetroot, yam, sweet corn, sweet pumpkin.
5 pm: Nuts, plus hot coffee or tea (green or black) with lemon / ginger, without sugar or jaggery.
Supper – 8 pm: Hot chicken or veg soup (without corn or corn starch); Rice and curry / chapathi with veg / fish or chicken with salads.
- Drink non refrigerated water every one or two hours, for up to three litres.
- Red meat is allowed in any form every other day!
- Use either coconut oil or ghee for cooking.
Follow these restrictions strictly for 4-6 weeks, during and after recovery from covid. Those with diabetics, obesity and other co-morbidities must follow stricter protocols
Dr. Srinivas Kakkilaya, MD, Physician, Dr. Balasaraswathy, DNB, Dermatologist,
Spandana Centre for Metabolic Medicine, Mangaluru – 575001; Authors of Don’t be Afraid of Corona (in Kannada, titled Corona Hedaradirona), Navakarnataka Publications
ಕೊರೋನ ರೋಗವನ್ನೆದುರಿಸಲು ಆಹಾರ ನಿಯಂತ್ರಣ
ಕೊರೋನ ರೋಗವು ಆಧುನಿಕ ಆಹಾರ ಮತ್ತು ಆಧುನಿಕ ಜೀವನಶೈಲಿಗಳೊಂದಿಗೆ ಮತ್ತು ಅವುಗಳಿಂದುಂಟಾಗುವ ಆಧುನಿಕ ರೋಗಗಳೊಂದಿಗೆ ಬಹು ನಿಕಟವಾಗಿ ಬೆಸೆದುಕೊಂಡಿದೆ – ಈ ರೋಗಗಳು ಕೊರೋನ ರೋಗವನ್ನು ಬಿಗಡಾಯಿಸುತ್ತವೆ, ಕೊರೋನ ರೋಗವು ಈ ಆಧುನಿಕ ರೋಗಗಳನ್ನು ಬಿಗಡಾಯಿಸುತ್ತದೆ. ನಮ್ಮ ಆಹಾರ ಮತ್ತು ಜೀವನಶೈಲಿಗಳನ್ನು ಬದಲಿಸಿಕೊಳ್ಳುವ ಮೂಲಕ ನಮ್ಮ ದೇಹದ ಉಪಾಪಚಯವನ್ನು ಸುಸ್ಥಿತಿಯಲ್ಲಿಟ್ಟರೆ ಕೊರೋನವನ್ನು ಸುಲಭವಾಗಿ ಸೋಲಿಸಬಹುದು.
ಆರೋಗ್ಯಕರ ಆಹಾರ ತಿನ್ನಿ – ನಿಯತ ವ್ಯಾಯಾಮ ಮಾಡಿ – ಬೇಕಷ್ಟು ನಿದ್ದೆ ಮಾಡಿ!
ಕೊರೋನ ರೋಗದಿಂದ ಬೇಗನೆ ಚೇತರಿಸಿಕೊಳ್ಳಲು ಒಳ್ಳೆಯ ಆಹಾರ : ದಿನಕ್ಕೆ 2-3 ಮೊಟ್ಟೆ (ಬೇಯಿಸಿ/ಆಮ್ಲೆಟ್/ಪಲ್ಯ/ಬುರ್ಜಿ), ಬಿಸಿಯಾದ, ಸೌಮ್ಯ ಮಸಾಲೆಗಳುಳ್ಳ ಕೋಳಿ ಸೂಪ್ ಅಥವಾ ಬೇಳೆ ಸೂಪ್, ಹೆಚ್ಚಿನ ಪ್ರಮಾಣದಲ್ಲಿ ಗೋಡಂಬಿ ಮತ್ತು ವಾಲ್ನಟ್, ಜೊತೆಗೆ ಮೀನು, ಮಾಂಸ ಮತ್ತು ಯಥೇಷ್ಟವಾಗಿ ತರಕಾರಿಗಳು.ಇವಿಷ್ಟನ್ಣೇ ಸೇವಿಸುವುದರಿಂದ ಕೊರೋನ ರೋಗದಿಂದ ಬೇಗನೇ ಚೇತರಿಸಿಕೊಳ್ಳಬಹುದು, ತೀವ್ರ ಸಮಸ್ಯೆಗಳನ್ನು ತಡೆಯಲೂಬಹುದು.
ಕಡ್ಡಾಯವಾಗಿ ತ್ಯಜಿಸಿ: ಹಣ್ಣುಗಳು (ತಾಜಾ ಅಥವಾ ಒಣಗಿದ್ದು), ಸಕ್ಕರೆ, ಎಲ್ಲಾ ಸಿಹಿ ತಿನಿಸುಗಳು, ಜೇನು ಮತ್ತು ಬೆಲ್ಲ. ಹಾಲಿನ ಉತ್ಪನ್ನಗಳನ್ನು ಮಿತಿಗೊಳಿಸಿ. ಸಿದ್ಧ ತಿನಿಸುಗಳು, ಬೇಕರಿ ಉತ್ಪನ್ನಗಳು, ಸಂಸ್ಕರಿತ ತಿನಿಸುಗಳನ್ನು ಸಂಪೂರ್ಣವಾಗಿ ತ್ಯಜಿಸಿ.
ಸೈಟೋಕೈನ್ ಬಿರುದಾಳಿಯನ್ನು ತಡೆಯುವುದಕ್ಕೆ ಸಕ್ಕರೆ ಮತ್ತು ಸಂಸ್ಕರಿತ ಆಹಾರವನ್ನು ಮಿತಿಗೊಳಿಸುವುದೇ ಅತ್ಯುತ್ತಮ ಉಪಾಯವಾಗಿದೆ. ಹಣ್ಣುಗಳಲ್ಲಿರುವ ಫ್ರಕ್ಟೋಸ್ ಸಕ್ಕರೆಯು ಉತ್ಕರ್ಷಣದ ಒತ್ತಡಗಳನ್ನು ಹೆಚ್ಚಿಸಿ ಉರಿಯೂತವನ್ನು ಹೆಚ್ಚಿಸುವುದರಿಂದ ಹಣ್ಣುಗಳಿಂದ ಅದೇನೇ ಲಾಭಗಳಿದ್ದರೂ ನಷ್ಟವೇ ಹೆಚ್ಚಾಗುತ್ತದೆ!
ಆಹಾರಕ್ರಮದ ಉದಾಹರಣೆ:
ಬೆಳಗ್ಗಿನ ಉಪಾಹಾರ – 8 ಗಂಟೆಗೆ: 2-3 ಬೇಯಿಸಿದ ಮೊಟ್ಟೆ/ 2-3 ಇಡ್ಲಿ ಅಥವಾ 1-2 ರಾಗಿ ದೋಸೆ, ಜೊತೆಗೆ ತೆಂಗಿನಕಾಯಿ ಚಟ್ನಿ ಅಥವಾ ಬೇಳೆ ಸಾರು, ಜೊತೆಗೆ ಕಾಫಿ/ಚಹಾ (ಹಾಲುು ಬೇಡ ಯಾ ಅತ್ಯಲ್ಪ, ಸಕ್ಕರೆ/ಬೆಲ್ಲ ಬೇಡ)
ಪೂ 11ಗಂಟೆ: ಬಿಸಿನೀರಲ್ಲಿ ಉಪ್ಪು ಬೆರೆಸಿ ನಿಂಬೆ ಹಣ್ಣಿನ ರಸ, ಜೊತೆಗೆ ಗೋಡಂಬಿ, ಬಾದಾಮಿ, ವಾಲ್ನಟ್ ಅಥವಾ ಪಿಸ್ತಾ (ನೆಲಕಡಲೆ ಬೇಡ)
ಅಪರಾಹ್ನ ಊಟ – 2 ಗಂಟೆ: ಕುಚ್ಚಲಕ್ಕಿ ಅನ್ನ (ಒಂದು ಕಪ್), ಯಥೇಷ್ಟ ತರಕಾರಿಗಳು, ಬೇಳೆ ಅಥವಾ ತೆಂಗಿನಕಾಯಿ ಬೆರೆಸಿದ ಪದಾರ್ಥಗಳು/ ಕೋಳಿ ಅಥವಾ ಮೀನಿನ ಪದಾರ್ಥ; ಹಬೆಯಲ್ಲಿ ಅಥವಾ ನವಿರಾಗಿ ಕಾಯಿಸಿದ ತರಕಾರಿ ಖಾದ್ಯ (ಬಟಾಟೆ, ಬೀಟ್ರೂಟ್, ಕ್ಯಾರೆಟ್, ಸುವರ್ಣಗೆಡ್ಡೆ, ಸಿಹಿಕುಂಬಳಕಾಯಿ ಬೇಡ)
ಸಂಜೆ 5 ಗಂಟೆ: ಬೀಜಗಳು, ಜೊತೆಗೆ ಕಾಫಿ/ಚಹಾ (ಕಪ್ಪು/ಹಸಿರು), ಅದರಲ್ಲಿ ನಿಂಬೆ/ಶುಂಠಿ ಬೆರೆಸಬಹುದು, ಸಕ್ಕರೆ ಅಥವಾ ಬೆಲ್ಲ ಕೂಡದು
ರಾತ್ರಿಯ ಊಟ – 8 ಗಂಟೆ: ಬಿಸಿಯಾದ ಕೋಳಿ ಅಥವಾ ತರಕಾರಿ ಸೂಪ್ (ಜೋಳದ ಪುಡಿ ಬೆರೆಸಬಾರದು); ಸ್ವಲ್ಪ ಅನ್ನ, ಸಾರು ಅಥವಾ ಚಪಾತಿ ಪಲ್ಯ/ ಕೋಳಿ, ಮೀನು, ಜೊತೆಗೆ ತರಕಾರಿಗಳು
- ತಂಪಾಗಿಸದ ನೀರನ್ನು ಒಂದೆರಡು ಗಂಟೆಗೊಮ್ಮೆಯಂತೆ ದಿನಕ್ಕೆ ಒಟ್ಟು ಮೂರು ಲೀಟರ್ ಆದರೂ ಕುಡಿಯಿರಿ.
- ಮಾಂಸವನ್ನು ಎರಡು ದಿನಕ್ಕೊಮ್ಮೆಯಾದರೂ ತಿನ್ನಬಹುದು!
- ಅಡುಗೆಗೆ ತೆಂಗಿನೆಣ್ಣೆ ಅಥವಾ ತುಪ್ಪವನ್ನು ಬಳಸಿ.
ಈ ಆಹಾರಕ್ರಮವನ್ನು 4-6 ವಾರಗಳವರೆಗಾದರೂ, ಕೊರೋನ ರೋಗವಿರುವಾಗ ಮತ್ತು ಚೇತರಿಸಿಕೊಂಡ ಬಳಿಕವೂ, ಸೇವಿಸಿ. ಸಕ್ಕರೆ ಕಾಯಿಲೆ, ಬೊಜ್ಜು ಮತ್ತಿತರ ಸಮಸ್ಯೆಗಳುಳ್ಳವರು ಇನ್ನಷ್ಟು ಕಠಿಣವಾಗಿ ಆಹಾರಕ್ರಮವನ್ನು ಪಾಲಿಸಬೇಕು.
ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಎಂಡಿ, ತಜ್ಞ ವೈದ್ಯರು, ಡಾ. ಬಾಲಸರಸ್ವತಿ, ಡಿಎನ್ಬಿ, ಚರ್ಮ ತಜ್ಞರು,
ಸ್ಪಂದನ ಉಪಾಪಚಯ ವಿಜ್ಞಾನ ಕೇಂದ್ರ, ಮಂಗಳೂರು 575001; ಲೇಖಕರು, ಕೊರೋನ ಹೆದರದಿರೋಣ, ನವಕರ್ನಾಟಕ ಪ್ರಕಾಶನ